ಆಗಾಗ ಕೇಳಲಾಗುವ ಪ್ರಶ್ನೆಗಳು

faq-image

ನೀವು ನಮ್ಮ ವೆಬ್‌ಸೈಟ್ ನಲ್ಲಿ ಡಿಶ್ ಟಿವಿ ಕನೆಕ್ಷನ್ ಅನ್ನು ಆನ್ಲೈನ್‌ನಲ್ಲಿ ಖರೀದಿಸಬಹುದು. ಯಾವ ರೀತಿಯ ಕನೆಕ್ಷನ್ ಪಡೆಯಬೇಕು ಎಂಬ ಕುರಿತು ನಿಮಗೆ ಸಹಾಯ ಬೇಕಾದರೆ, ನೀವು 1800-270-0300 ಗೆ ಮಿಸ್ ಕಾಲ್ ಕೊಡಬಹುದು .

ಹೌದು, ಡಿಶ್ ಟಿವಿ ಈಗ ಭಾರತದಾದ್ಯಂತ ಲಭ್ಯವಿದೆ. ಕೆಲವು ರೀತಿಯ ಕನೆಕ್ಷನ್‌ಗಳು (ನಮ್ಮ ಸ್ಮಾರ್ಟ್ ಬಾಕ್ಸ್‌ ರೀತಿಯ) ನೀವು ವಾಸಿಸುವ ನಗರ/ಪ್ರದೇಶದಲ್ಲಿ ಸೀಮಿತ ಲಭ್ಯತೆಯನ್ನು ಹೊಂದಿರಬಹುದು. ಇನ್ನಷ್ಟು ತಿಳಿಯಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

ಡಿಶ್ ಟಿವಿಯು ಸಾಟಿಯಿಲ್ಲದ HD ಚಿತ್ರ ಗುಣಮಟ್ಟ ಮತ್ತು ಕ್ರಿಸ್ಟಲ್ ಸ್ಪಷ್ಟ ಧ್ವನಿಯನ್ನು ಒದಗಿಸುತ್ತದೆ. ನಮ್ಮ ತಾಂತ್ರಿಕ ಶ್ರೇಷ್ಠತೆ, ನಮ್ಮ ವ್ಯಾಪ್ತಿ ಮತ್ತು ಕಡಿಮೆ ವೆಚ್ಚವು ನಮ್ಮ ಪ್ರತಿಸ್ಪರ್ಧಿಗಳಿಂದ ನಮ್ಮನ್ನು ಪ್ರತ್ಯೇಕಿಸುತ್ತದೆ. ಡಿಶ್ ಟಿವಿ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಮತ್ತು ಕೈಗೆಟಕುವ ಡಿಟಿಎಚ್ ಸೇವೆಯಾಗಿದೆ.

ಹೊಸ ಡಿಶ್ ಟಿವಿ ಕನೆಕ್ಷನ್‌ಗಳ ಮೇಲೆ ಹೆಚ್ಚಿನ ಸಮಯ ನಾವು ಅತ್ಯಾಕರ್ಷಕ ಆಫರ್‌ಗಳನ್ನು ನೀಡುತ್ತೇವೆ. ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಹೌದು, ನಿಮ್ಮ ಹೊಸ ಡಿಶ್ ಟಿವಿ ಕನೆಕ್ಷನ್‌ಗೆ ನೀವು ವಾರಂಟಿಯನ್ನು ಪಡೆಯುತ್ತೀರಿ ನೀಡಲಾದ ವಾರಂಟಿಯ ವಿವರಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:

  • ಸೆಟ್-ಟಾಪ್-ಬಾಕ್ಸ್ ಯುನಿಟ್ ಮೇಲೆ ಮಾತ್ರ 5 ವರ್ಷದ ವಾರಂಟಿ
  • ಇನ್ಸ್ಟಾಲೇಶನ್ ಮೇಲೆ 1 ವರ್ಷದ ವಾರಂಟಿ
  • ಎಲ್‌ಎನ್‌ಬಿ, ರಿಮೋಟ್ ಮತ್ತು ಪವರ್ ಅಡಾಪ್ಟರ್ ಮೇಲೆ 1 ವರ್ಷದ ವಾರಂಟಿ

ಗಮನಿಸಿ: ಮೇಲೆ ವಿವರಿಸಿದ ವಾರಂಟಿಯ ಪ್ರಯೋಜನಗಳನ್ನು ಪಡೆಯಲು, ಗ್ರಾಹಕರು ಸತತವಾಗಿ 30 ದಿನಗಳಿಗಿಂತ ಹೆಚ್ಚು ಅವಧಿಗೆ ಕನೆಕ್ಷನ್ ನಿಷ್ಕ್ರಿಯಗೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಹೌದು, ನಿಮ್ಮ ಹೊಸ ಡಿಶ್ ಟಿವಿ ಕನೆಕ್ಷನ್‌ಗೆ ನೀವು ವಾರಂಟಿಯನ್ನು ಪಡೆಯುತ್ತೀರಿ ನೀಡಲಾದ ವಾರಂಟಿಯ ವಿವರಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:

  • ಸೆಟ್-ಟಾಪ್-ಬಾಕ್ಸ್ ಯುನಿಟ್ ಮೇಲೆ ಮಾತ್ರ 5 ವರ್ಷದ ವಾರಂಟಿ
  • ಇನ್ಸ್ಟಾಲೇಶನ್ ಮೇಲೆ 1 ವರ್ಷದ ವಾರಂಟಿ
  • ಎಲ್‌ಎನ್‌ಬಿ, ರಿಮೋಟ್ ಮತ್ತು ಪವರ್ ಅಡಾಪ್ಟರ್ ಮೇಲೆ 1 ವರ್ಷದ ವಾರಂಟಿ

ಗಮನಿಸಿ: ಮೇಲೆ ವಿವರಿಸಿದ ವಾರಂಟಿಯ ಪ್ರಯೋಜನಗಳನ್ನು ಪಡೆಯಲು, ಗ್ರಾಹಕರು ಸತತವಾಗಿ 30 ದಿನಗಳಿಗಿಂತ ಹೆಚ್ಚು ಅವಧಿಗೆ ಕನೆಕ್ಷನ್ ನಿಷ್ಕ್ರಿಯಗೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಸೆಟ್-ಟಾಪ್-ಬಾಕ್ಸ್ ಕಂಟ್ರೋಲ್ ಮಾಡಲು ನಿಮಗೆ ಸೆಟ್-ಟಾಪ್-ಬಾಕ್ಸ್, ಡಿಶ್ ಆಂಟೆನಾ ಮತ್ತು ರಿಮೋಟ್ ಅಗತ್ಯವಿದೆ ಈ ಎಲ್ಲಾ ಹಾರ್ಡ್‌ವೇರ್ ಹೊಸ ಡಿಶ್ ಟಿವಿ ಕನೆಕ್ಷನ್‌ನೊಂದಿಗೆ ಬರುತ್ತದೆ ಇನ್‌ಸ್ಟಾಲೇಶನ್ ಶುಲ್ಕಗಳು ಮತ್ತು ಕೇಬಲ್‌ ಶುಲ್ಕಗಳು ಹೆಚ್ಚುವರಿಯಾಗಿರಬಹುದು.

ಸ್ಯಾಟಲೈಟ್‌ನಿಂದ ತಡೆರಹಿತ ಸಿಗ್ನಲ್‌ಗಳನ್ನು ಪಡೆಯಲು ಸ್ಪಷ್ಟವಾಗಿ ಆಕಾಶವು ಕಾಣುವಂತಹ ಮುಕ್ತ ಜಾಗದಲ್ಲಿ ಡಿಶ್ ಆಂಟೆನಾವನ್ನು ಸ್ಥಾಪಿಸಲಾಗುತ್ತದೆ ಇದನ್ನು ಚಾವಣಿ, ವರಾಂಡ, ಟೆರೇಸ್ ಅಥವಾ ಬಾಲ್ಕನಿ ಇತ್ಯಾದಿಗಳಲ್ಲಿ ಇನ್ಸ್ಟಾಲ್ ಮಾಡಬಹುದು.

ಹೌದು, ಪ್ರತಿ ಟಿವಿಗೆ ನಿಮಗೆ ಪ್ರತ್ಯೇಕ ಸೆಟ್-ಟಾಪ್-ಬಾಕ್ಸ್ ಅಗತ್ಯವಿರುತ್ತದೆ. ನಾಮಮಾತ್ರದ ವೆಚ್ಚದಲ್ಲಿ ನಿಮ್ಮ ಪ್ರಾಥಮಿಕ ಸಂಪರ್ಕದೊಂದಿಗೆ ನೀವು 3 ವರೆಗೆ ಹೆಚ್ಚುವರಿ ಸಂಪರ್ಕಗಳನ್ನು ಸೇರಿಸಬಹುದು.

ಹೌದು, ಈಗ ಡಿಶ್ ಟಿವಿ ಸ್ಮಾರ್ಟ್/ಕನೆಕ್ಟೆಡ್ ಸೆಟ್-ಟಾಪ್-ಬಾಕ್ಸ್ ಆಗಿರುವ Dish SMRTHUB ಜೊತೆಗೆ, ನೀವು ಎರಡೂ ಜಗತ್ತಿನಲ್ಲೂ ಅತ್ಯುತ್ತಮವಾದದನ್ನು ಹೊಂದಬಹುದು. Dish SMRTHUB ಜೊತೆಗೆ, ನೀವು ನಿಯಮಿತ ಟಿವಿ ಚಾನೆಲ್‌ಗಳನ್ನು ಮತ್ತು ಯುಟ್ಯೂಬ್, ಅಮೆಜಾನ್ ಪ್ರೈಮ್ ಮತ್ತು Watcho ನಂತಹ ಒಟಿಟಿ ಸೇವೆಗಳನ್ನು ನೋಡಬಹುದು. ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. ಒಟಿಟಿ ಸೇವೆಗಳಿಗೆ ಸಬ್‌ಸ್ಕ್ರಿಪ್ಷನ್, ಯಾವುದಾದರೂ ಇದ್ದರೆ, ಪ್ರತ್ಯೇಕವಾಗಿ ಖರೀದಿಸಬೇಕು.

ಡಿಶ್ ಟಿವಿ ಭಾರತದ ಮೊದಲ ಮತ್ತು ಏಷ್ಯಾದ ಅತಿದೊಡ್ಡ ಡೈರೆಕ್ಟ್-ಟು-ಹೋಮ್ ಡಿಜಿಟಲ್ ಎಂಟರ್ಟೈನ್ಮೆಂಟ್ ಸರ್ವಿಸ್ ಪ್ರೊವೈಡರ್ ಆಗಿದ್ದು, ಅದು ನಿಮ್ಮ ಟಿವಿ ಸೆಟ್‌ಗೆ ಮುಂದುವರಿದ ಮೌಲ್ಯವರ್ಧಿತ ಸೇವೆಗಳೊಂದಿಗೆ 500+ ಕ್ಕೂ ಹೆಚ್ಚು ಚಾನೆಲ್‌ಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ.

ಡಿಶ್ ಟಿವಿಯು ನಿಮ್ಮ ಮನೆಯಲ್ಲಿ ಇನ್ಸ್ಟಾಲ್ ಮಾಡಲಾಗಿರುವ ಒಂದು ಸೆಟ್-ಟಾಪ್ ಬಾಕ್ಸ್ (ಎಸ್‍ಟಿಬಿ) ಮತ್ತು ಡಿಶ್ ಆಂಟೆನಾ ಮೂಲಕ ಕೆಲಸ ಮಾಡುತ್ತದೆ. ಟಿ.ವಿ. ಸೆಟ್ ಜೊತೆಗೆ ಕನೆಕ್ಷನ್ ಹೊಂದಿರುವ ಕೇಬಲ್ ಮೂಲಕ ಆಂಟೆನಾ ಎಸ್‍ಟಿಬಿ ಜೊತೆಗೆ ಕನೆಕ್ಷನ್ ಹೊಂದಿರುತ್ತದೆ. ಎಸ್‍ಟಿಬಿ ಆಂಟೆನಾದಿಂದ ಸಿಗ್ನಲನ್ನು ಡಿಕೋಡ್ ಮಾಡುತ್ತದೆ ಮತ್ತು ನಿಮ್ಮ ಮೆಚ್ಚಿನ ಚಾನೆಲ್‍ಗಳನ್ನು ನಿಮ್ಮ ಟಿವಿ ಸ್ಕ್ರೀನಿಗೆ ತರುತ್ತದೆ.

  • ಡಿವಿಡಿ ನೋಡುತ್ತಿರುವ ರೀತಿಯ ಅತ್ಯುತ್ತಮ ಚಿತ್ರದ ಗುಣಮಟ್ಟ
  • ಸ್ಟೀರಿಯೋ ಫೋನಿಕ್ ಸೌಂಡ್
  • 700+ ಚಾನಲ್‌ಗಳು ಮತ್ತು ಸೇವೆಗಳ ಸಾಮರ್ಥ್ಯ
  • ಭೌಗೋಳಿಕ ಚಲನಶೀಲತೆ
  • ತಡೆರಹಿತ ವೀಕ್ಷಣೆ
  • ವಿಡಿಯೋ ಗೇಮ್‌ಗಳು
  • ವಿಶೇಷ ಅಂತರರಾಷ್ಟ್ರೀಯ ಚಾನೆಲ್‍ಗಳು
  • ಪೇರೆಂಟಲ್ ಲಾಕ್ ಸೌಲಭ್ಯ
  • ಎಲೆಕ್ಟ್ರಾನಿಕ್ ಪ್ರೊಗ್ರಾಮ್ ಗೈಡ್
  • ಮೌಲ್ಯವರ್ಧಿತ ಸೇವೆಗಳು

ಯಾವ ತೊಂದರೆಯೂ ಇಲ್ಲ! ಡಿಶ್ ಟಿವಿಯು ಡಿಜಿಟಲ್ ಮತ್ತು ಡೈರೆಕ್ಟ್ ಆಗಿದೆ, ಇದರರ್ಥ ನೀವು ಡಿಶ್ ಟಿವಿ ಇನ್ಸ್ಟಾಲ್ ಮಾಡುವಾಗ, ನಿಮ್ಮ ಕೇಬಲ್ ಕನೆಕ್ಷನ್‌ಗೆ ತೊಂದರೆ ಆಗುವುದಿಲ್ಲ, ನಿಮ್ಮ ಸ್ವಂತ ಡಿಶ್ ಇನ್ಸ್ಟಾಲ್ ಮಾಡಿ, ನಿಮ್ಮ ಈಗಿರುವ ಟಿವಿಗೆ ಸೆಟ್-ಟಾಪ್ ಬಾಕ್ಸ್ ಕನೆಕ್ಟ್ ಮಾಡಿ, ನಿಮ್ಮ ವೈಯಕ್ತಿಕ ಅನನ್ಯ ವ್ಯೂವಿಂಗ್ ಕಾರ್ಡ್ ಸೇರಿಸಿದರೆ ಮುಗಿಯಿತು!

ವಾಸ್ತವವಾಗಿ, ನಿಮ್ಮ ಟಿವಿ ಸೆಟ್ ರಿಮೋಟಿನಿಂದ ಎವಿ ಆಯ್ಕೆಯನ್ನು ಆರಿಸುವುದರ ಮೂಲಕ ಸಾಮಾನ್ಯ ಟಿವಿ ಮೋಡಿನಲ್ಲಿ ನಿಮ್ಮ ಸದ್ಯದ ಕೇಬಲ್ ಕನೆಕ್ಷನ್ನಿಗೆ ಅಡ್ಡಿಪಡಿಸದೆ ಎವಿ ಮೋಡ್‌‌ನಲ್ಲಿ ಟಿವಿ ನೋಡಬಹುದು. ಅಂದರೆ ಎರಡೂ ಇನ್ಪುಟ್‍ಗಳನ್ನು ಒಂದೇ ಬಾರಿಗೆ ಬಳಸಬಹುದು

ಯಾವುದೇ ಅಧಿಕೃತ ಡಿಶ್ ಟಿವಿ ಡೀಲರ್ ಮೂಲಕ ನೀವು ಡಿಶ್ ಟಿವಿ ಹೊಸ ಮತ್ತು ಆಕರ್ಷಕ ಜಗತ್ತನ್ನು ಆನಂದಿಸಬಹುದು. ನಿಮ್ಮ ಹತ್ತಿರದ ಬಹಳಷ್ಟು ಕನ್ಸೂಮರ್ ಡ್ಯೂರೇಬಲ್ ಔಟ್‍ಲೆಟ್‍ಗಳು ಅಧಿಕೃತ ಡಿಶ್ ಟಿವಿ ಡೀಲರ್‌ಗಳಾಗಿರುತ್ತವೆ. ನಿಮ್ಮ ಹತ್ತಿರದ ಡೀಲರನ್ನು ಗುರುತಿಸಲು ನಮ್ಮ ವೆಬ್ಸೈಟಿನ ಡೀಲರ್ ಲೊಕೇಟರ್ ವಿಭಾಗವನ್ನು ನೀವು ನೋಡಬಹುದು. ಇಲ್ಲಿ ಕ್ಲಿಕ್ ಮಾಡಿ ಡಿಶ್‌ಟಿವಿ ಡೀಲರ್ ಲೊಕೇಟರ್‌ಗೆ ಭೇಟಿ ನೀಡಿ.

ಹೌದು, ಡಿಶ್ ಟಿವಿ ಭಾರತದ ಎಲ್ಲಾ ರಾಜ್ಯಗಳಲ್ಲೂ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ, "ಡಿಶ್ ಟಿವಿ ಡೀಲರ್ ಲೊಕೇಟರ್" ಗೆ ಭೇಟಿ ನೀಡಿ ಮತ್ತು ನಿಮ್ಮ ಹತ್ತಿರದ ಡಿಶ್ ಟಿವಿ ಡೀಲರನ್ನು ಹುಡುಕಲು ನಿಮ್ಮ ಪ್ರದೇಶದ ಪಿನ್ ಕೋಡನ್ನು ಬಳಸಿ. ಇಲ್ಲಿ ಕ್ಲಿಕ್ ಮಾಡಿ ಡಿಶ್‌ಟಿವಿ ಡೀಲರ್ ಲೊಕೇಟರ್‌ಗೆ ಭೇಟಿ ನೀಡಿ.

ನಿಮ್ಮ ಸೆಟ್-ಟಾಪ್-ಬಾಕ್ಸ್ ಹನ್ನೆರಡು ತಿಂಗಳ ಹಾರ್ಡ್‌ವೇರ್ ವಾರಂಟಿಯೊಂದಿಗೆ ಬರುತ್ತದೆ. ಸಾಮಾನ್ಯವಾಗಿ ಡಿಶ್ ಮತ್ತು ಎಲ್ಎನ್‍ಬಿಯಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದಾಗ್ಯೂ, ನಿಮ್ಮ ಮಾರಾಟಗಾರರು ಇನ್ಸ್ಟಾಲೇಶನ್ 60 ದಿನಗಳವರೆಗೆ ನಿಮಗೆ ಉಚಿತ ಬೆಂಬಲ ನೀಡುತ್ತಾರೆ.

ನೀವು ಡಿಶ್ ಟಿವಿ ಕನೆಕ್ಷನನ್ನು ಬುಕ್ ಮಾಡಿದಾಗ ಈ ಕೆಳಗಿನ ಹಾರ್ಡ್‌ವೇರ್/ ಸಲಕರಣೆಗಳನ್ನು ಪಡೆಯುತ್ತೀರಿ:

  • ಎಲ್‍ಎನ್‍ಬಿ ಜೊತೆಗೆ ಡಿಶ್
  • ಸೆಟ್-ಟಾಪ್ ಬಾಕ್ಸ್ ಮತ್ತು ಕೇಬಲ್
  • ವ್ಯೂವಿಂಗ್ ಕಾರ್ಡ್ (ವಿಸಿ)

ವಿಸಿ ಜೊತೆಗೆ ಸೆಟ್ ಟಾಪ್ ಬಾಕ್ಸನ್ನು ನಿಮ್ಮ ಮನೆಯಲ್ಲಿ ಇನ್ಸ್ಟಾಲ್ ಮಾಡಿ ನಿಮ್ಮ ಟಿವಿಗೆ ಕನೆಕ್ಟ್ ಮಾಡಲಾಗುವುದು. ಡಿಶ್ ಅನ್ನು ಛಾವಣಿ/ ಟೆರೇಸ್/ ವೆರಾಂಡಾ/ ಲಾನ್ ಹೊರಗೆ ಸ್ಯಾಟಲೈಟ್‌ ದಿಕ್ಕಿಗೆ ಎದುರಾಗಿ ಯಾವುದೇ ಅಡೆತಡೆ ಇಲ್ಲದ ಸ್ಥಳದಲ್ಲಿ ಕೂರಿಸಲಾಗುತ್ತದೆ. ನಮ್ಮ ತಜ್ಞರು ಇನ್‌ಸ್ಟಾಲೇಶನ್ ಮಾಡುತ್ತಾರೆ.

ನೀವು ಡಿಶ್ ಟಿವಿ ಕನೆಕ್ಷನನ್ನು ಬುಕ್ ಮಾಡಿದಾಗ ಈ ಕೆಳಗಿನ ಹಾರ್ಡ್‌ವೇರ್/ ಸಲಕರಣೆಗಳನ್ನು ಪಡೆಯುತ್ತೀರಿ:

  • ಎಲ್‍ಎನ್‍ಬಿ ಜೊತೆಗೆ ಡಿಶ್
  • ಸೆಟ್-ಟಾಪ್ ಬಾಕ್ಸ್ ಮತ್ತು ಕೇಬಲ್
  • ವ್ಯೂವಿಂಗ್ ಕಾರ್ಡ್ (ವಿಸಿ)

ವಿಸಿ ಜೊತೆಗೆ ಸೆಟ್- ಟಾಪ್ ಬಾಕ್ಸನ್ನು ನಿಮ್ಮ ಮನೆಯಲ್ಲಿ ಇನ್ಸ್ಟಾಲ್ ಮಾಡಿ ನಿಮ್ಮ ಟಿವಿಗೆ ಕನೆಕ್ಟ್ ಮಾಡಲಾಗುವುದು. ಡಿಶ್ ಅನ್ನು ಛಾವಣಿ/ ಟೆರೇಸ್ / ವೆರಾಂಡಾ / ಲಾನ್‌ನಲ್ಲಿ ಕೂರಿಸಲಾಗುತ್ತದೆ - ಆ ಜಾಗದಲ್ಲಿ ಅದು ಸ್ಯಾಟಲೈಟ್‌ ಕಡೆಗೆ ಮುಖ ಮಾಡಿರಬೇಕು ಮತ್ತು ನಡುವೆ ಯಾವುದೇ ಅಡೆತಡೆ/ಬ್ಲಾಕೇಜ್ ಇರಬಾರದು. ಅದನ್ನು ನಮ್ಮ ಪರಿಣಿತರು ಕೂರಿಸುತ್ತಾರೆ.

ಇದು ಸ್ಯಾಟಲೈಟ್ ಸಿಗ್ನಲ್‌ಗಳನ್ನು ಪಡೆದುಕೊಳ್ಳಬೇಕಾದ ಕಾರಣ ಇದನ್ನು ನಿಮ್ಮ ಕಟ್ಟಡದ ಮೇಲ್ಛಾವಣಿ, ವೆರಾಂಡಾ, ಟೆರೇಸ್ ಮೇಲೆ ಅಥವಾ ಆಕಾಶವು ಸ್ಪಷ್ಟವಾಗಿ ಕಾಣುವೆಡೆಯಲ್ಲಿ ಇದನ್ನು ಕೂರಿಸಬೇಕು.

ಹೌದು, ನಿಮ್ಮ ಎಲ್ಲಾ ಟಿವಿಗಳಲ್ಲೂ ಡಿಶ್ ಟಿವಿ ನೋಡಲು ಸಹಾಯವಾಗುವ ಹಾಗೆ ನಾವು ಮಲ್ಟಿ ಟಿವಿ ಕನೆಕ್ಷನ್ ನೀಡುತ್ತೇವೆ.

https://www.dishtv.in/kn-in/pages/offers/multitv-child-pack.aspx

ಡಿಶ್‌ಟಿವಿ ಅತ್ಯಂತ ಅಗ್ಗವಾಗಿದೆ ಮತ್ತು ಆಕರ್ಷಕ ಸ್ಕೀಮ್‌ಗಳನ್ನು ಒದಗಿಸುತ್ತದೆ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ- https://www.dishtv.in/pages/welcome/products.aspx

ಹಾಳಾದ ಸೆಟ್-ಟಾಪ್-ಬಾಕ್ಸ್ ಬದಲಾಯಿಸಲು ಶುಲ್ಕಗಳು:

₹ 250 ಬಾಕ್ಸ್ ಸ್ವ್ಯಾಪ್ ಶುಲ್ಕಗಳು (ಸೆಟ್-ಟಾಪ್-ಬಾಕ್ಸ್ ವಾರಂಟಿ ಅವಧಿ ಮೀರಿದ್ದರೆ) + ₹ 200 ಟೆಕ್ನಿಶಿಯನ್ ಭೇಟಿ ಶುಲ್ಕಗಳು (ಒಂದು ವೇಳೆ ಟೆಕ್ನಿಶಿಯನ್ ಭೇಟಿಯು ವಾರಂಟಿ ಅವಧಿಯ ಹೊರಗಿದ್ದರೆ) + ಹಾರ್ಡ್‌ವೇರ್ ಶುಲ್ಕಗಳು (ಯಾವುದಾದರೂ ಇದ್ದರೆ)

Dish SMRT Hub ಬಾಕ್ಸ್ ಸ್ವ್ಯಾಪ್ ಶುಲ್ಕಗಳು:

₹ 700 ಬಾಕ್ಸ್ ಸ್ವ್ಯಾಪ್ ಶುಲ್ಕಗಳು (ಸೆಟ್-ಟಾಪ್-ಬಾಕ್ಸ್ ವಾರಂಟಿ ಅವಧಿ ಮೀರಿದ್ದರೆ) + ₹ 200 ಟೆಕ್ನಿಶಿಯನ್ ಭೇಟಿ ಶುಲ್ಕಗಳು (ಒಂದು ವೇಳೆ ಟೆಕ್ನಿಶಿಯನ್ ಭೇಟಿಯು ವಾರಂಟಿ ಅವಧಿಯ ಹೊರಗಿದ್ದರೆ) + ಹಾರ್ಡ್‌ವೇರ್ ಶುಲ್ಕಗಳು (ಯಾವುದಾದರೂ ಇದ್ದರೆ)

ಸೆಟ್-ಟಾಪ್-ಬಾಕ್ಸ್ ಬದಲಾವಣೆ/ಬದಲಿಯ ಸಂದರ್ಭದಲ್ಲಿ ರಿಪೇರಿ ಮಾಡಿದ ಸೆಟ್-ಟಾಪ್-ಬಾಕ್ಸ್ ಅನ್ನು ಸಬ್‌‌ಸ್ಕ್ರೈಬರ್‌‌‌‌‌ಗೆ ಒದಗಿಸಲಾಗುತ್ತಿದ್ದು, ಬದಲಾವಣೆ/ಬದಲಿ ಮಾಡಿದ ಸೆಟ್-ಟಾಪ್-ಬಾಕ್ಸ್‌ಗೆ 180 ದಿನಗಳ ವಾರಂಟಿ ನೀಡಲಾಗುವುದು.

ಮತ್ತೊಮ್ಮೆ ₹300 ಪಾವತಿಸುವ ಮೂಲಕ ನೀವು ಡೀಲರ್‌ನಿಂದ ಹೊಸ ಕಾರ್ಡ್ ಪಡೆದುಕೊಳ್ಳುತ್ತೀರಿ ಮತ್ತು ನಿಮ್ಮ ಕಳೆದುಹೋದ/ಹಾನಿಗೊಳಗಾದ ವಿಸಿಯ ಡೆಪಾಸಿಟ್ ಅನ್ನು ಮುಟ್ಟುಗೋಲು ಹಾಕಲಾಗುತ್ತದೆ.

Dishtv universal Remote ಅನ್ನು ಪರಿಚಯಿಸುತ್ತಿದೆ. ನಿಮ್ಮ ಸೆಟ್-ಟಾಪ್-ಬಾಕ್ಸ್ ಮತ್ತು ಟಿವಿ ಎರಡಕ್ಕೂ ಒಂದು ವೈವಿಧ್ಯಮಯ ಮತ್ತು ಜಂಜಡ ರಹಿತ ರಿಮೋಟ್. ನಯವಾದ, ಮ್ಯಾಟ್ ಪಿನಿಷ್ ವಿನ್ಯಾಸದಲ್ಲಿ ನೀಡಲಾಗಿದೆ. ಈ ರಿಮೋಟ್ ಎಲ್ಲಾ Samsung ಟಿವಿಗಳಿಗೆ ಮೊದಲೇ ಕಾನ್ಫಿಗರ್ ಆಗಿದೆ, ಮತ್ತು ಎಲ್ಲಾ ಇತರ ಬ್ರ್ಯಾಂಡ್ ಟಿವಿಗಳ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಈಗ ಇದು ಸುಲಭ ಮನರಂಜನೆಯಾಗಿದೆ.

* 2 ಎಎ ಬ್ಯಾಟರಿಗಳು ಬೇಕು

.Dishtv universal Remote ಅನ್ನು ಸಮತಟ್ಟಾದ ಮೇಲ್ಮೈ ಮೇಲಿರಿಸಿ. ಎಲ್ಇಡಿ ಲೈಟ್‌‍ಗಳು ನೇರವಾಗಿ ಎದುರು ಬದುರಾಗಿರುವಂತೆ ನಿಮ್ಮ ಟಿವಿ ರಿಮೋಟ್ ಅನ್ನು ಯೂನಿವರ್ಸಲ್ ರಿಮೋಟ್ ಎದುರು ಇರಿಸಿ. ರಿಮೋಟ್‍ಗಳ ನಡುವಿನ ಅಂತರವು 5cm ಆಗಿರಬೇಕು.
ಯೂನಿವರ್ಸಲ್ ರಿಮೋಟ್‌ನ ಟಿವಿ ಪವರ್ ಬಟನ್ ಅನ್ನು ಪ್ರೋಗ್ರಾಮ್ ಮಾಡಲು, ಯೂನಿವರ್ಸಲ್ ರಿಮೋಟ್‌ನ ಟಿವಿ ಪವರ್ ಕೀಯನ್ನು ಒತ್ತಿರಿ. ನೀವು ಮುಂದುವರಿಸಬಹುದು ಎಂದು ಖಚಿತಪಡಿಸಲು ಡಿಶ್ ಟಿವಿ ರಿಮೋಟ್‌ನ ಕೆಂಪು ಟಿವಿ ಮೋಡ್ ಎಲ್ಇಡಿ ಒಮ್ಮೆ ಮಿನುಗುತ್ತದೆ.
ಟಿವಿ ರಿಮೋಟಿನಲ್ಲಿ ಪವರ್ ಕೀಯನ್ನು ಒತ್ತಿರಿ. ಕಮಾಂಡ್ ತಿಳಿದುಕೊಂಡಿದೆಯೆಂದು ಖಚಿತಪಡಿಸಲು ಯೂನಿವರ್ಸಲ್ ರಿಮೋಟಿನ ಕೆಂಪು ಟಿವಿ ಮೋಡ್ ಎಲ್ಇಡಿ ಎರಡು ಬಾರಿ ಮಿನುಗುತ್ತದೆ.
ವಾಲ್ಯೂಮ್ ಅಪ್/ಡೌನ್‌ಗಾಗಿಯೂ ನೀವು ಅದೇ ಪ್ರಕ್ರಿಯೆಯನ್ನು ಅನುಸರಿಸಬಹುದು. ಮ್ಯೂಟ್, ಸೋರ್ಸ್ & ನೇವಿಗೇಶನ್(ಅಪ್/ ಡೌನ್/ ಲೆಫ್ಟ್/ ರೈಟ್/ ಓಕೆ).
ಕಲಿತ ಕಮಾಂಡ್‌ಗಳನ್ನು ಸೇವ್ ಮಾಡಲು, ಕೆಂಪು ಟಿವಿ ಮೋಡ್ ಎಲ್ಇಡಿ ಮೂರು ಬಾರಿ ಮಿನುಗುವರೆಗೂ ಯೂನಿವರ್ಸಲ್ ರಿಮೋಟ್‌ನಲ್ಲಿ ಟಿವಿ ಪವರ್ ಕೀಯನ್ನು ಒತ್ತಿ.

ದೇಶದಲ್ಲಿ ನಗದುರಹಿತ ಟ್ರಾನ್ಸಾಕ್ಷನ್‌ಗಳನ್ನು ಪ್ರೋತ್ಸಾಹಿಸಲು, ಡಿಶ್ ಟಿವಿ ಸಬ್‍ಸ್ಕ್ರೈಬರ್‌ ಯಾವುದೇ ಒಗ್ಗೂಡಿಸಿದ ಪಾವತಿ ಇಂಟರ್ಫೇಸ್ ಆ್ಯಪ್ ಮೂಲಕ (ಭಾರತದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಪ್ರಾರಂಭಿಸಿದ ಏಕ ಗವಾಕ್ಷಿ ಮೊಬೈಲ್ ಪಾವತಿ ವ್ಯವಸ್ಥೆ) ಅಥವಾ ಅಸಂಘಟಿತ ಪೂರಕ ಸೇವೆ ಡೇಟಾ (ಯುಎಸ್ಎಸ್‍ಡಿ) ಮೂಲಕ ತಮ್ಮ ಸಬ್‍ಸ್ಕ್ರಿಪ್ಷನನ್ನು ಈಗ ರೀಚಾರ್ಜ್ ಮಾಡಬಹುದು.

ನಿಮ್ಮ ಡಿಶ್‌ಟಿವಿ ಸಬ್‍ಸ್ಕ್ರಿಪ್ಷನ್ ಅನ್ನು ಯುಪಿಐ ಅಥವಾ ಯುಎಸ್ಎಸ್‍ಡಿ ಮೂಲಕ ರಿಚಾರ್ಜ್ ಮಾಡಲು ನೀವು ಅನುಸರಿಸಬಹುದಾದ ಹಂತಗಳು ಹೀಗಿವೆ:

ಆ್ಯಪ್:

  • ಹಂತ 1: ಆ್ಯಪ್ ಸ್ಟೋರ್ ಅಥವಾ ಪ್ಲೇ ಸ್ಟೋರ್‌ನಿಂದ BHIM/ICICI pocket ಮುಂತಾದ ಯಾವುದೇ ಯುಪಿಐ ಆ್ಯಪ್ ಡೌನ್ಲೋಡ್ ಮಾಡಿ.
  • ಹಂತ 2: ನೋಂದಣಿ ಮಾಡಿ ಮತ್ತು ನಿಮ್ಮ ವಿಶಿಷ್ಟ ಪಿನ್ ರಚಿಸಿ.
  • ಹಂತ 3: ನಿಮ್ಮ ಆ್ಯಪ್‌ನಲ್ಲಿ ಯುಪಿಐ ಟ್ಯಾಬ್/ಐಕಾನ್ ಮೇಲೆ ಕ್ಲಿಕ್ ಮಾಡಿ.
  • ಹಂತ 4: ಕಳುಹಿಸಿ/ಪಾವತಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ಹಂತ 5: ನಿಮ್ಮ ಟ್ರಾನ್ಸಾಕ್ಷನ್ ಪೂರ್ಣಗೊಳಿಸಲು dishtv. @icici ಎಂಬ ಪೇಮೆಂಟ್ ಅಡ್ರೆಸ್ ನಮೂದಿಸಿ.

ಈಗ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಬಳಸಿಕೊಂಡು ನಿಮ್ಮ ಡಿಶ್ ಟಿವಿ ಸಬ್‍ಸ್ಕ್ರಿಪ್ಷನನ್ನು ತಕ್ಷಣ ರೀಚಾರ್ಜ್ ಮಾಡಿ. ನೀವು ವಾಲೆಟ್ ಮತ್ತು ಯುಪಿಐ ಸಕ್ರಿಯ ಆ್ಯಪ್‌ಗಳಿಂದಲೂ ಪಾವತಿ ಮಾಡಬಹುದು.ಗೂಗಲ್ ಪ್ಲೇಸ್ಟೋರಿನಿಂದ ಡಿಶ್ ಟಿವಿ ಆ್ಯಪನ್ನು ಡೌನ್ಲೋಡ್ ಮಾಡಿ ಮತ್ತು ನಿಮ್ಮ ಬಿಲ್‍ಗಳನ್ನು ತಕ್ಷಣ ಪಾವತಿಸಿ.

ಈಗ ರಿಚಾರ್ಜ್ ಮಾಡಿ

ನಿಮ್ಮ ಮನೆ ಬಾಗಿಲಿನಲ್ಲಿ ಡಿಶ್ ಟಿವಿ ರಿಚಾರ್ಜ್ ತೆಗೆದುಕೊಳ್ಳುವಂತೆ ಮಾಡಿ <DISHTV HOME PICK> ಇಲ್ಲಿಗೆ <57575> ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನಿಂದ ಕಳುಹಿಸಿ ಮತ್ತು ಈ ಸೇವೆಯನ್ನು ಪಡೆದುಕೊಳ್ಳಿ. ಈ ಸೇವೆಯನ್ನು ಪಡೆಯಲು ಅಗತ್ಯವಿರುವ ಕನಿಷ್ಠ ರಿಚಾರ್ಜ್ ಮೊತ್ತ ₹1500/-.

*ಈ ಸೇವೆ ಆಯ್ದ ನಗರಗಳಲ್ಲಿ ಮಾತ್ರ ಲಭ್ಯವಿದೆ, ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು ನಮಗೆ ಈ ನಂಬರಿಗೆ ಕರೆ ಮಾಡಿ 95017-95017

ನಿಮ್ಮ ಹತ್ತಿರದ ಡಿಶ್ ಟಿವಿ ಡೀಲರ್ ಅನ್ನು ಭೇಟಿ ಮಾಡಿ ಮತ್ತು ನಿಮ್ಮ ಕನೆಕ್ಷನ್ ರಿಚಾರ್ಜ್ ಮಾಡಿ.