ಗ್ರಾಹಕರ ವೇದಿಕೆ

ನಿಮ್ಮ ಡಿಶ್‌ಟಿವಿ ಕನೆಕ್ಷನ್‌ಗೆ ಸಂಬಂಧಿಸಿದ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಿ 

ಡಿಶ್ ಟಿವಿ ಕನೆಕ್ಷನ್

background-image
customer-img customer-img

ಗ್ರಾಹಕ ಸಹಾಯವಾಣಿ

ಸ್ಥಳೀಯ ಕಾಲ್ (ಶುಲ್ಕಗಳು ಅಪ್ಲೈ ಆಗುತ್ತವೆ)

ಸಂಪರ್ಕಿಸಲು ಇತರ ಮಾರ್ಗಗಳು

ಕಾಲ್‌ಬ್ಯಾಕ್ ಪಡೆಯಿರಿ

ಎಸ್ಎಂಎಸ್‌ನಲ್ಲಿ “ನನಗೆ ಕಾಲ್ ಮಾಡಿ” ಎಂದು ಇಲ್ಲಿಗೆ 57575
ಇಲ್ಲಿಂದ: ನಿಮ್ಮ ನೋಂದಾಯಿತ
ಮೊಬೈಲ್ ನಂಬರ್.

ವಿಳಾಸ

ಡಿಶ್ ಟಿವಿ ಇಂಡಿಯಾ ಲಿಮಿಟೆಡ್ ಎಫ್‌ಸಿ - 19,

ಸೆಕ್ಟರ್ 16 ಎ, ಫಿಲ್ಮ್ ಸಿಟಿ,
ನೋಯ್ಡಾ, ಉತ್ತರ ಪ್ರದೇಶ, ಭಾರತ.
ಪಿನ್ ಕೋಡ್-201301

ಕಾರ್ಪೊರೇಟ್/ಬಿಸಿನೆಸ್ ವಿಚಾರಣೆ

ದೂರು ಪರಿಹಾರಕ್ಕಾಗಿ ಕಾರ್ಯವಿಧಾನ ಮತ್ತು ಮಾನದಂಡ
ಡಿಶ್‌ಟಿವಿಯ ದೂರು ಪರಿಹಾರ ನೀತಿಯ ಬಗ್ಗೆ ತಿಳಿಯಿರಿ
TRAI ಮ್ಯಾಂಡೇಟ್‌ನಲ್ಲಿ ಆಗುವ ಯಾವುದೇ ಹೊಸ ಬದಲಾವಣೆಗಳ ಕುರಿತು ಮಾಹಿತಿ ಪಡೆಯಿರಿ

ಗ್ರಾಹಕ ಒಪ್ಪಂದ ಫಾರ್ಮ್

consumer-icon

ಡಿಶ್‌ಟಿವಿ ಪ್ರಾಕ್ಟೀಸ್ ಮ್ಯಾನುಯಲ್

manualpractice-icon

ಗ್ರಾಹಕರ ಆವರಣದ ಉಪಕರಣಗಳು (ಸಿಪಿಇ) ಸ್ಕೀಮ್

cpe-icon

ಇನ್ನೂ ಕೆಲವು ಪ್ರಶ್ನೆಗಳಿವೆಯೇ?

 


 ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

  • ಡಿಶ್ ಟಿವಿ ಭಾರತದ ಮೊದಲ ಮತ್ತು ಏಷ್ಯಾದ ಅತಿದೊಡ್ಡ ಡೈರೆಕ್ಟ್-ಟು-ಹೋಮ್ ಡಿಜಿಟಲ್ ಎಂಟರ್ಟೈನ್ಮೆಂಟ್ ಸರ್ವಿಸ್ ಪ್ರೊವೈಡರ್ ಆಗಿದ್ದು, ಅದು ನಿಮ್ಮ ಟಿವಿ ಸೆಟ್‌ಗೆ ಮುಂದುವರಿದ ಮೌಲ್ಯವರ್ಧಿತ ಸೇವೆಗಳೊಂದಿಗೆ 700+ ಕ್ಕೂ ಹೆಚ್ಚು ಚಾನೆಲ್‌ಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ.

ಡಿಶ್ ಟಿವಿಯು ನಿಮ್ಮ ಮನೆಯಲ್ಲಿ ಇನ್ಸ್ಟಾಲ್ ಮಾಡಲಾಗಿರುವ ಒಂದು ಸೆಟ್-ಟಾಪ್ ಬಾಕ್ಸ್ (ಎಸ್‍ಟಿಬಿ) ಮತ್ತು ಡಿಶ್ ಆಂಟೆನಾ ಮೂಲಕ ಕೆಲಸ ಮಾಡುತ್ತದೆ. ಟಿ.ವಿ. ಸೆಟ್ ಜೊತೆಗೆ ಕನೆಕ್ಷನ್ ಹೊಂದಿರುವ ಕೇಬಲ್ ಮೂಲಕ ಆಂಟೆನಾ ಎಸ್‍ಟಿಬಿ ಜೊತೆಗೆ ಕನೆಕ್ಷನ್ ಹೊಂದಿರುತ್ತದೆ. ಎಸ್‍ಟಿಬಿ ಆಂಟೆನಾದಿಂದ ಸಿಗ್ನಲನ್ನು ಡಿಕೋಡ್ ಮಾಡುತ್ತದೆ ಮತ್ತು ನಿಮ್ಮ ಮೆಚ್ಚಿನ ಚಾನೆಲ್‍ಗಳನ್ನು ನಿಮ್ಮ ಟಿವಿ ಸ್ಕ್ರೀನಿಗೆ ತರುತ್ತದೆ.

  • ಡಿವಿಡಿ ನೋಡುತ್ತಿರುವ ರೀತಿಯ ಅತ್ಯುತ್ತಮ ಚಿತ್ರದ ಗುಣಮಟ್ಟ
  • ಸ್ಟೀರಿಯೋ ಫೋನಿಕ್ ಸೌಂಡ್
  • 700+ ಚಾನಲ್‌ಗಳು ಮತ್ತು ಸೇವೆಗಳ ಸಾಮರ್ಥ್ಯ
  • ಭೌಗೋಳಿಕ ಚಲನಶೀಲತೆ
  • ತಡೆರಹಿತ ವೀಕ್ಷಣೆ
  • ವಿಡಿಯೋ ಗೇಮ್‌ಗಳು
  • ವಿಶೇಷ ಅಂತರರಾಷ್ಟ್ರೀಯ ಚಾನೆಲ್‍ಗಳು
  • ಪೇರೆಂಟಲ್ ಲಾಕ್ ಸೌಲಭ್ಯ
  • ಎಲೆಕ್ಟ್ರಾನಿಕ್ ಪ್ರೊಗ್ರಾಮ್ ಗೈಡ್
  • ಮೌಲ್ಯವರ್ಧಿತ ಸೇವೆಗಳು

ಯಾವ ತೊಂದರೆಯೂ ಇಲ್ಲ! ಡಿಶ್ ಟಿವಿಯು ಡಿಜಿಟಲ್ ಮತ್ತು ಡೈರೆಕ್ಟ್ ಆಗಿದೆ, ಇದರರ್ಥ ನೀವು ಡಿಶ್ ಟಿವಿ ಇನ್ಸ್ಟಾಲ್ ಮಾಡುವಾಗ, ನಿಮ್ಮ ಕೇಬಲ್ ಕನೆಕ್ಷನ್‌ಗೆ ತೊಂದರೆ ಆಗುವುದಿಲ್ಲ, ನಿಮ್ಮ ಸ್ವಂತ ಡಿಶ್ ಇನ್ಸ್ಟಾಲ್ ಮಾಡಿ, ನಿಮ್ಮ ಈಗಿರುವ ಟಿವಿಗೆ ಸೆಟ್-ಟಾಪ್ ಬಾಕ್ಸ್ ಕನೆಕ್ಟ್ ಮಾಡಿ, ನಿಮ್ಮ ವೈಯಕ್ತಿಕ ಅನನ್ಯ ವ್ಯೂವಿಂಗ್ ಕಾರ್ಡ್ ಸೇರಿಸಿದರೆ ಮುಗಿಯಿತು!

ವಾಸ್ತವವಾಗಿ, ನಿಮ್ಮ ಟಿವಿ ಸೆಟ್ ರಿಮೋಟಿನಿಂದ ಎವಿ ಆಯ್ಕೆಯನ್ನು ಆರಿಸುವುದರ ಮೂಲಕ ಸಾಮಾನ್ಯ ಟಿವಿ ಮೋಡಿನಲ್ಲಿ ನಿಮ್ಮ ಸದ್ಯದ ಕೇಬಲ್ ಕನೆಕ್ಷನ್ನಿಗೆ ಅಡ್ಡಿಪಡಿಸದೆ ಎವಿ ಮೋಡ್‌‌ನಲ್ಲಿ ಟಿವಿ ನೋಡಬಹುದು. ಅಂದರೆ ಎರಡೂ ಇನ್ಪುಟ್‍ಗಳನ್ನು ಒಂದೇ ಬಾರಿಗೆ ಬಳಸಬಹುದು

ಯಾವುದೇ ಅಧಿಕೃತ ಡಿಶ್ ಟಿವಿ ಡೀಲರ್ ಮೂಲಕ ನೀವು ಡಿಶ್ ಟಿವಿ ಹೊಸ ಮತ್ತು ಆಕರ್ಷಕ ಜಗತ್ತನ್ನು ಆನಂದಿಸಬಹುದು. ನಿಮ್ಮ ಹತ್ತಿರದ ಬಹಳಷ್ಟು ಕನ್ಸೂಮರ್ ಡ್ಯೂರೇಬಲ್ ಔಟ್‍ಲೆಟ್‍ಗಳು ಅಧಿಕೃತ ಡಿಶ್ ಟಿವಿ ಡೀಲರ್‌ಗಳಾಗಿರುತ್ತವೆ. ನಿಮ್ಮ ಹತ್ತಿರದ ಡೀಲರನ್ನು ಗುರುತಿಸಲು ನಮ್ಮ ವೆಬ್ಸೈಟಿನ ಡೀಲರ್ ಲೊಕೇಟರ್ ವಿಭಾಗವನ್ನು ನೀವು ನೋಡಬಹುದು. ಇಲ್ಲಿ ಕ್ಲಿಕ್ ಮಾಡಿ ಡಿಶ್‌ಟಿವಿ ಡೀಲರ್ ಲೊಕೇಟರ್‌ಗೆ ಭೇಟಿ ನೀಡಿ.

ಹೌದು, ಡಿಶ್ ಟಿವಿ ಭಾರತದ ಎಲ್ಲಾ ರಾಜ್ಯಗಳಲ್ಲೂ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ, "ಡಿಶ್ ಟಿವಿ ಡೀಲರ್ ಲೊಕೇಟರ್" ಗೆ ಭೇಟಿ ನೀಡಿ ಮತ್ತು ನಿಮ್ಮ ಹತ್ತಿರದ ಡಿಶ್ ಟಿವಿ ಡೀಲರನ್ನು ಹುಡುಕಲು ನಿಮ್ಮ ಪ್ರದೇಶದ ಪಿನ್ ಕೋಡನ್ನು ಬಳಸಿ. ಇಲ್ಲಿ ಕ್ಲಿಕ್ ಮಾಡಿ ಡಿಶ್‌ಟಿವಿ ಡೀಲರ್ ಲೊಕೇಟರ್‌ಗೆ ಭೇಟಿ ನೀಡಿ.

ನಿಮ್ಮ ಸೆಟ್-ಟಾಪ್-ಬಾಕ್ಸ್ ಹನ್ನೆರಡು ತಿಂಗಳ ಹಾರ್ಡ್‌ವೇರ್ ವಾರಂಟಿಯೊಂದಿಗೆ ಬರುತ್ತದೆ. ಸಾಮಾನ್ಯವಾಗಿ ಡಿಶ್ ಮತ್ತು ಎಲ್ಎನ್‍ಬಿಯಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದಾಗ್ಯೂ, ನಿಮ್ಮ ಮಾರಾಟಗಾರರು ಇನ್ಸ್ಟಾಲೇಶನ್ 60 ದಿನಗಳವರೆಗೆ ನಿಮಗೆ ಉಚಿತ ಬೆಂಬಲ ನೀಡುತ್ತಾರೆ.

ನೀವು ಡಿಶ್ ಟಿವಿ ಕನೆಕ್ಷನನ್ನು ಬುಕ್ ಮಾಡಿದಾಗ ಈ ಕೆಳಗಿನ ಹಾರ್ಡ್‌ವೇರ್/ ಸಲಕರಣೆಗಳನ್ನು ಪಡೆಯುತ್ತೀರಿ:

ವಿಸಿ ಜೊತೆಗೆ ಸೆಟ್ ಟಾಪ್ ಬಾಕ್ಸನ್ನು ನಿಮ್ಮ ಮನೆಯಲ್ಲಿ ಇನ್ಸ್ಟಾಲ್ ಮಾಡಿ ನಿಮ್ಮ ಟಿವಿಗೆ ಕನೆಕ್ಟ್ ಮಾಡಲಾಗುವುದು. ಡಿಶ್ ಅನ್ನು ಛಾವಣಿ/ ಟೆರೇಸ್/ ವೆರಾಂಡಾ/ ಲಾನ್ ಹೊರಗೆ ಸ್ಯಾಟಲೈಟ್‌ ದಿಕ್ಕಿಗೆ ಎದುರಾಗಿ ಯಾವುದೇ ಅಡೆತಡೆ ಇಲ್ಲದ ಸ್ಥಳದಲ್ಲಿ ಕೂರಿಸಲಾಗುತ್ತದೆ. ನಮ್ಮ ತಜ್ಞರು ಇನ್‌ಸ್ಟಾಲೇಶನ್ ಮಾಡುತ್ತಾರೆ.

  • ಎಲ್‍ಎನ್‍ಬಿ ಜೊತೆಗೆ ಡಿಶ್
  • ಸೆಟ್-ಟಾಪ್ ಬಾಕ್ಸ್ ಮತ್ತು ಕೇಬಲ್
  • ವ್ಯೂವಿಂಗ್ ಕಾರ್ಡ್ (ವಿಸಿ)

ನೀವು ಡಿಶ್ ಟಿವಿ ಕನೆಕ್ಷನನ್ನು ಬುಕ್ ಮಾಡಿದಾಗ ಈ ಕೆಳಗಿನ ಹಾರ್ಡ್‌ವೇರ್/ ಸಲಕರಣೆಗಳನ್ನು ಪಡೆಯುತ್ತೀರಿ:

  • ಎಲ್‍ಎನ್‍ಬಿ ಜೊತೆಗೆ ಡಿಶ್
  • ಸೆಟ್-ಟಾಪ್ ಬಾಕ್ಸ್ ಮತ್ತು ಕೇಬಲ್
  • ವ್ಯೂವಿಂಗ್ ಕಾರ್ಡ್ (ವಿಸಿ)

ವಿಸಿ ಜೊತೆಗೆ ಸೆಟ್- ಟಾಪ್ ಬಾಕ್ಸನ್ನು ನಿಮ್ಮ ಮನೆಯಲ್ಲಿ ಇನ್ಸ್ಟಾಲ್ ಮಾಡಿ ನಿಮ್ಮ ಟಿವಿಗೆ ಕನೆಕ್ಟ್ ಮಾಡಲಾಗುವುದು. ಡಿಶ್ ಅನ್ನು ಛಾವಣಿ/ ಟೆರೇಸ್ / ವೆರಾಂಡಾ / ಲಾನ್‌ನಲ್ಲಿ ಕೂರಿಸಲಾಗುತ್ತದೆ - ಆ ಜಾಗದಲ್ಲಿ ಅದು ಸ್ಯಾಟಲೈಟ್‌ ಕಡೆಗೆ ಮುಖ ಮಾಡಿರಬೇಕು ಮತ್ತು ನಡುವೆ ಯಾವುದೇ ಅಡೆತಡೆ/ಬ್ಲಾಕೇಜ್ ಇರಬಾರದು. ಅದನ್ನು ನಮ್ಮ ಪರಿಣಿತರು ಕೂರಿಸುತ್ತಾರೆ.

ಇದು ಸ್ಯಾಟಲೈಟ್ ಸಿಗ್ನಲ್‌ಗಳನ್ನು ಪಡೆದುಕೊಳ್ಳಬೇಕಾದ ಕಾರಣ ಇದನ್ನು ನಿಮ್ಮ ಕಟ್ಟಡದ ಮೇಲ್ಛಾವಣಿ, ವೆರಾಂಡಾ, ಟೆರೇಸ್ ಮೇಲೆ ಅಥವಾ ಆಕಾಶವು ಸ್ಪಷ್ಟವಾಗಿ ಕಾಣುವೆಡೆಯಲ್ಲಿ ಇದನ್ನು ಕೂರಿಸಬೇಕು.

ಹೌದು, ನಿಮ್ಮ ಎಲ್ಲಾ ಟಿವಿಗಳಲ್ಲೂ ಡಿಶ್ ಟಿವಿ ನೋಡಲು ಸಹಾಯವಾಗುವ ಹಾಗೆ ನಾವು ಮಲ್ಟಿ ಟಿವಿ ಕನೆಕ್ಷನ್ ನೀಡುತ್ತೇವೆ.

https://www.dishtv.in/kn-in/pages/offers/multitv-child-pack.aspx

ಡಿಶ್‌ಟಿವಿ ಅತ್ಯಂತ ಅಗ್ಗವಾಗಿದೆ ಮತ್ತು ಆಕರ್ಷಕ ಸ್ಕೀಮ್‌ಗಳನ್ನು ಒದಗಿಸುತ್ತದೆ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ- https://www.dishtv.in/pages/welcome/products.aspx

ಹಾಳಾದ ಸೆಟ್-ಟಾಪ್-ಬಾಕ್ಸ್ ಬದಲಾಯಿಸಲು ಶುಲ್ಕಗಳು:

₹ 250 ಬಾಕ್ಸ್ ಸ್ವ್ಯಾಪ್ ಶುಲ್ಕಗಳು (ಸೆಟ್-ಟಾಪ್-ಬಾಕ್ಸ್ ವಾರಂಟಿ ಅವಧಿ ಮೀರಿದ್ದರೆ) + ₹ 200 ಟೆಕ್ನಿಶಿಯನ್ ಭೇಟಿ ಶುಲ್ಕಗಳು (ಒಂದು ವೇಳೆ ಟೆಕ್ನಿಶಿಯನ್ ಭೇಟಿಯು ವಾರಂಟಿ ಅವಧಿಯ ಹೊರಗಿದ್ದರೆ) + ಹಾರ್ಡ್‌ವೇರ್ ಶುಲ್ಕಗಳು (ಯಾವುದಾದರೂ ಇದ್ದರೆ)

Dish SMRT Hub ಬಾಕ್ಸ್ ಸ್ವ್ಯಾಪ್ ಶುಲ್ಕಗಳು:

₹ 700 ಬಾಕ್ಸ್ ಸ್ವ್ಯಾಪ್ ಶುಲ್ಕಗಳು (ಸೆಟ್-ಟಾಪ್-ಬಾಕ್ಸ್ ವಾರಂಟಿ ಅವಧಿ ಮೀರಿದ್ದರೆ) + ₹ 200 ಟೆಕ್ನಿಶಿಯನ್ ಭೇಟಿ ಶುಲ್ಕಗಳು (ಒಂದು ವೇಳೆ ಟೆಕ್ನಿಶಿಯನ್ ಭೇಟಿಯು ವಾರಂಟಿ ಅವಧಿಯ ಹೊರಗಿದ್ದರೆ) + ಹಾರ್ಡ್‌ವೇರ್ ಶುಲ್ಕಗಳು (ಯಾವುದಾದರೂ ಇದ್ದರೆ)

ಸೆಟ್-ಟಾಪ್-ಬಾಕ್ಸ್ ಬದಲಾವಣೆ/ಬದಲಿಯ ಸಂದರ್ಭದಲ್ಲಿ ರಿಪೇರಿ ಮಾಡಿದ ಸೆಟ್-ಟಾಪ್-ಬಾಕ್ಸ್ ಅನ್ನು ಸಬ್‌‌ಸ್ಕ್ರೈಬರ್‌‌‌‌‌ಗೆ ಒದಗಿಸಲಾಗುತ್ತಿದ್ದು, ಬದಲಾವಣೆ/ಬದಲಿ ಮಾಡಿದ ಸೆಟ್-ಟಾಪ್-ಬಾಕ್ಸ್‌ಗೆ 180 ದಿನಗಳ ವಾರಂಟಿ ನೀಡಲಾಗುವುದು.